ಶ್ರೀ.ಜಿ.ಆರ್.ಗೋಲ್ಡ್ ಫಿಲ್ಂ ಲಾಂಛನದಲ್ಲಿ ಜಿ.ರಾಮಚಂದ್ರನ್ ನಿರ್ಮಿಸುತ್ತಿರುವ ರವಿರಾಜ್ ನಿರ್ದೇಶನ ಸೂಪರ್ ಶಾಸ್ತ್ರಿ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಯು/ಎ. ಸರ್ಟಿಫಿಕೇಟ್ ನೀಡಿದೆ. ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಈ ಚಿತ್ರದ ಛಾಯಾಗ್ರಹಣ ಕಾಶೀ ವಿಶ್ವನಾಥ್, ಸಂಗೀತ ದೇವ, ಸಾಹಿತ್ಯ ಕೆ.ಕಲ್ಯಾಣ್, ಕಲೆ ಕೃಷ್ಣಾಚಾರಿ, ಸಾಹಸ : ಮಾಸ್ ಮಾದ, ನಿರ್ವಹಣೆ : ಸತೀಶ್ ಕುಮಾರ್, ತಾರಾಗಣದಲ್ಲಿ ಪ್ರಜ್ವಲ್ದೇವರಾಜ್, ಹರಿಪ್ರಿಯ, ರಂಗಾಯಣ ರಘು, ಬುಲೆಟ್ ಪ್ರಕಾಶ್, ಅಂಬಿಕಾ ಸೋನಿ, ಉಮಾಶ್ರೀ, ಜಿ.ಆರ್. ಪ್ರೀತಿ, ರೇಖಾಕುಮಾರ್, ಮಾಸ್ಟರ್ ಸುರೇಶ್, ಮಾಸ್ಟರ್ ಮಂಜು, ಮುಮಿಕ್ರಿ ರಾಜಗೋಪಾಲ್, ಮೈಸೂರ್ ರಮಾನಂದ್, ಕೋಟೆ ಪ್ರಭಾಕರ್, ಮುನಿ ಹಾಗೂ ಪಲ್ಲಕ್ಕಿ ರಾಧಾಕೃಷ್ಣ ಅಭಿನಯಿಸುತ್ತಿದ್ದಾರೆ.